ನನ್ನ ಮುದ್ದು ತಾರೆ
ನನ್ನ ಮುದ್ದು ತಾರೆ ನಗುತಲಿ ಬಾರೆ
ನಿನ್ನ ಬಿಟ್ಟು ಎಂದಿಗೂ ನಾನಿರಲಾರೆ || ಪ ||
ನನ್ನ ನಿನ್ನ ಈ ಸ್ನೇಹಾ ಇಂದಿನದಲ್ಲ
ನಿನ್ನ ನನ್ನ ಸಂಬಂಧ ನೆನ್ನೆಯದಲ್ಲ
ಪರಿಚಯ ಎಂದೆಂದಿಗೂ ಮರೆಯುವುದಲ್ಲ || 1 ||
ಅಪ್ಪ ಅಮ್ಮ ಯಾರೆಂದು ನೋಡಲೇ ಇಲ್ಲ
ಅಣ್ಣ ತಮ್ಮ ಎಲ್ಲೆಂದು ಹೆಳುವರಿಲ್ಲ
ನನಗೂ ನಿನ್ನಂತೆಯೇ ಗೆಳೆಯರು ಇಲ್ಲ
ನೀನು ದೂರಾದರೆ ಉಳಿಯುವುದಿಲ್ಲ || 2 |
ನನ್ನ ಕಂಡು ನೀ ಬಂದೆ ಏತಕೋ ಕಾಣೆ
ನನ್ನ ಮೇಲೆ ಈ ಪ್ರೇಮ ಏತಕೆ ಜಾಣೆ
ಅರಿಯೆನು ಎನೊನ್ದನು ನಾ ನಿನ್ನಾಣೆ || 3 ||
ನನ್ನ ಪುಟ್ಟ ಈ ಮನೆಗೆ ನೀ ಬೆಳಕಾದೆ
ಇನ್ನೂ ಬಾಳಬೇಕೆಂಬ ಆಸೆಯ ತಂದೆ
ತಿಮ್ಮನ ಸಂತೋಷಕೆ ಕಾರಣವಾದೆ
ಇಂದು ನಿನ್ನಿಂದ ನಾ ಹೊಸತನ ಕಂಡೆ || 4 ||
ಚಂದ ಮಾಮ ಬಾರೋ ಚಕ್ಕುಲಿ ಮಾಮ ಬಾರೋ
ತಾರೆಗೆ ನಿದ್ದೆ ತಾರೋ ಚಂದದ ಕನಸ ತೋರೋ || 5 ||
ಪರಿಕರಗಳು
ಸಾಲದ ಮಾಸಿಕ ಕಂತು (EMI)
ಸಾಲದ ಮಾಸಿಕ ಕಂತು (EMI) ಎಂದರೆ ಹಣಕಾಸು ಸಂಸ್ಥೆಯೊಂದರಿಂದ ಸಾಲ ತೆಗೆದುಕೊಂಡಾಗ, ಪ್ರತಿ ಮಾಸ ಅಥವಾ ಪ್ರತಿಕಾಲದಲ್ಲಿ ಪಾವತಿಸಬೇಕಾದ ನಿಗದಿತ ಮೊತ್ತ. ಮಾಸಿಕ ಕಂತನ್ನು ಆನ್‌ಲೈನ್‌ನಲ್ಲಿ ಲೆಕ್ಕಾಚಾರ ಮಾಡಿ.
ಹೆಸರು ಹುಡುಕಿ
ಲಿಂಗ, ಪ್ರಕಾರ, ವರ್ಗ, ಜನಪ್ರಿಯತೆಯ ಆಧಾರದ ಮೇಲೆ ಹೆಸರುಗಳನ್ನು ಹುಡುಕಿ. ಸಮಾನಾರ್ಥಕ ಹೆಸರುಗಳನ್ನು ಹುಡುಕಿ.
ಕರ್ನಾಟಕ ರಾಜ್ಯ
ಕರ್ನಾಟಕದ ಈ ನಕ್ಷೆಯಲ್ಲಿ ನೀವು ಪ್ರತಿ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ, ಆ ಜಿಲ್ಲೆಯ ವಿವರಗಳು – ಹವಾಮಾನ, ಜನಸಂಖ್ಯೆ, ಪ್ರಮುಖ ನಗರಗಳು, ಆರ್ಥಿಕ ಚಟುವಟಿಕೆಗಳು ಮತ್ತು ಇತರೆ ಮಾಹಿತಿಗಳನ್ನು ಈ ಪುಟದ ಕೆಳಭಾಗದಲ್ಲಿ ಅಥವಾ ಬಲ ಭಾಗದಲ್ಲಿ ನೋಡಬಹುದಾಗಿದೆ. ಪುಟವನ್ನು ಅನ್ವೇಷಿಸಿ ಮತ್ತು ಕರ್ನಾಟಕದ ಬಗ್ಗೆ ಹೆಚ್ಚು ತಿಳಿದುಕೊಳ್ಳಿ!